Breaking News

ಮಂಗಳೂರು :ಅಪಾರ್ಟ್ಮೆಂಟ್ ವೊಂದರ ಲಿಪ್ಟ್ ಅರ್ಧದಲ್ಲಿಯೆ ಸ್ಥಗಿತ; ಐವರ ರಕ್ಷಣೆ

Share News

ಮಂಗಳೂರು: ಮಂಗಳೂರು ನಗರದ ಅಪಾರ್ಟ್ಮೆಂಟ್ ವೊಂದರ ಲಿಪ್ಟ್ ಅರ್ಧದಲ್ಲಿಯೆ ಸ್ಥಗಿತಗೊಂಡ ಘಟನೆ ನಡೆದಿದ್ದು, ಲಿಪ್ಟ್ ನಲ್ಲಿದ್ದ ಐವರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: ಭಾರತ ಮೂಲದ ವಿದ್ಯಾರ್ಥಿಯನ್ನು ಅಮೇರಿಕದಲ್ಲಿ ಗುಂಡಿಟ್ಟು ಹತ್ಯೆ!

ನಗರದ ಬೆಂದೂರಿನಲ್ಲಿರುವ ಶಿಲ್ಪ ಪ್ಯಾಲೇಸ್ ಅಪಾರ್ಟ್ಮೆಂಟ್ ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸಂಜೆ 6.30 ರ ಸುಮಾರಿಗೆ ಐವರು ಯುವಕರು ಲಿಪ್ಟ್ ನಿಂದ ಮೇಲಿನ ಮಹಡಿಗೆ ಹೋಗುತ್ತಿದ್ದ ವೇಳೆ ಲಿಪ್ಟ್ ಒಂದನೇ ಮಹಡಿಯ ಮೇಲೆ ಹೋಗಿ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಬೆಳ್ತಂಗಡಿ : ಬೈಕ್ ಸ್ಟ್ಯಾಂಡ್ ನಿಂದ ಅಪಘಾತ ; ವಿದ್ಯಾರ್ಥಿ ಸಾವು!

ಪರಿಣಾಮ ಲಿಪ್ಟ್ ನೊಳಗಿದ್ದ ಐವರು ಲಿಪ್ಟ್ ನಲ್ಲಿ ಬಂಧಿಯಾಗಿದ್ದರು. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂರನೇ ಮಹಡಿಯಿಂದ ಒಂದನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಲಿಪ್ಟ್ ಎಳೆದು ಮೇಲೆ ತಂದಿದ್ದಾರೆ. ಆ ಮೂಲಕ ಐವರು ಯುವಕರನ್ನು ರಕ್ಷಿಸಿದ್ದಾರೆ.

WATCH VIDEO ON YOUTUBE: ಹುಟ್ಟಿ ಹರಿಯುವ ಪ್ರದೇಶದಿಂದ ಸಮುದ್ರ ಸೇರುವ ತನಕದ ಕಾವೇರಿ ನದಿಯ ಅದ್ಭುತ ದೃಶ್ಯ!


Share News

Leave a Reply

Your email address will not be published. Required fields are marked *