Breaking News

ಕರೋಕೆ ಮೈಕ್​ ಚಾರ್ಜ್​ಗೆ ಹಾಕಿ ಹಾಡುವ ವೇಳೆ ಸ್ಫೋಟ; ಅದೃಷ್ಟವಶಾತ್​ ಬಾಲಕಿ ಪಾರು!

Share News

ಪಲಕ್ಕಾಡ್​: ಕರೋಕೆ ಮೈಕ್​ ಅನ್ನು ಚಾರ್ಜ್​ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯ ಕಲ್ಲಡಿಕೋಡ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಚಾರ್ಮಾಡಿ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ ; ಮರದ ಸಹಾಯದಿಂದ ಡ್ರೈವರ್ ಮತ್ತು ಕ್ಲೀನರ್ ಸೇಫ್.!

ಬಚಾವ್​ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್​. ಈ ಘಟನೆ ಕಳೆದ ಭಾನುವಾರ ನಡೆದಿದೆ. ಭಾರೀ ಶಬ್ದದೊಂದಿಗೆ ಮೈಕ್​ ಸ್ಫೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ. ಕರೋಕೆ ಮೈಕ್​ ಅನ್ನು ಆನ್​ಲೈನ್​ ಸೈಟ್​ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿ ಮಾಡಲಾಗಿತ್ತು. ಮೈಕ್​ ಅನ್ನು ಚಾರ್ಜ್​ಗೆ ಹಾಕಿ, ಬಾಲಕಿ ಹಾಡು ಹೇಳುವಾಗ ಇದ್ದಕ್ಕಿದ್ದಂತ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ.

ಹೊಟೇಲ್ ನಲ್ಲಿ ರೂಂ ಕೊಟ್ಟು ಪ್ರೇಮಿಗಳ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ; ಇಬ್ಬರ ಬಂಧನ!

ಅದು ಚೀನಾ ನಿರ್ಮಿತ ಮೈಕ್​ ಎಂದು ಪಾಲಕರು ತಿಳಿಸಿದ್ದಾರೆ. ಆದರೆ ಮೈಕ್‌ನಲ್ಲಿ ಕಂಪನಿಯ ಹೆಸರು ಸ್ಪಷ್ಟವಾಗಿಲ್ಲದ ಕಾರಣ, ಕಂಪನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ
ಯಾವುದೇ ಸಾಧನಗಳನ್ನು ಚಾರ್ಜ್​ಗೆ ಹಾಕಿ ಬಳಸುವ ಅಭ್ಯಾಸವನ್ನು ಮೊದಲು ಬಿಡಬೇಕು. ಸಣ್ಣ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಹುದು. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಅದೃಷ್ಟ ಎಂದೇ ಹೇಳಬಹುದು. ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸೈನಿಕರಿಗೆ ಫ್ರೀಯಾಗಿ ಚಹಾ ನೀಡುವ ಅಂಗಡಿಯ ವಿಡಿಯೋ!


Share News

Leave a Reply

Your email address will not be published. Required fields are marked *