Breaking News

IND vs NEP: ಇತಿಹಾಸ ಬರೆದ ಜೈಸ್ವಾಲ್; ನೇಪಾಳ ವಿರುದ್ಧ ಭರ್ಜರಿ ಜಯ!

Share News

ಚೀನಾದ ಹ್ಯಾಂಗ್‌ಝೌನ ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆದ ಏಷ್ಯನ್ ಗೇಮ್ಸ್ (Asian Games 2023) ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ. ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಶತಕ ಹಾಗೂ ರವಿ ಬಿಷ್ಟೋಯಿ ಅವರ ಸ್ಪಿನ್ ಜಾದು ನೆರವಿನಿಂದ ಟೀಮ್ ಇಂಡಿಯಾ 23 ರನ್​ಗಳ ಜಯ ಸಾಧಿಸಿತು.

ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಬೊಂಬಾಟ್ ಆರಂಭ ಒದಗಿಸಿದರು. ಜೈಸ್ವಾಲ್ ಸಿಕ್ಸರ್​ಗಳ ಮಳೆ ಸುರಿಸಿದರೆ ಗಾಯಕ್ವಾಡ್ ಇವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಕೇವಲ 9.5 ಓವರ್​ಗಳಲ್ಲಿ ತಂಡದ ಮೊತ್ತವನ್ನು 100 ಗಡಿ ದಾಟಿಸಿತು. ರುತುರಾಜ್ 23 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ (2) ಹಾಗೂ ಜಿತೇಶ್ ಶರ್ಮಾ (5) ಮೋಡಿ ಮಾಡುವಲ್ಲಿ ವಿಫಲರಾದರು.

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ; 2 ವರ್ಷದ ಪುಟ್ಟ ಮಗು ಸೇರಿ ಇಬ್ಬರು ಮೃತ್ಯು!

ಆದರೆ, ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಜೈಸ್ವಾಲ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಇದು ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಚೊಚ್ಚಕ ಶತಕವಾಗಿದೆ. ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್​ನೊಂದಿಗೆ 100 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಶಿವಂ ದುಬೆ ಹಾಗೂ ರಿಂಕು ಮನಬಂದಂತೆ ಬ್ಯಾಟ್ ಬೀಸಿದರು. ರಿಂಕು 15 ಎಸೆಗಳಲ್ಲಿ 37 ಹಾಗೂ ದುಬೆ 25 ರನ್ ಸಿಡಿಸಿ ಅಜೇಯತಾಗಿ ಉಳಿದರು. ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ನೇಪಾಳ ಪರ ದಿಪೇಂದರ್ ಸಿಂಗ್ 2 ವಿಕೆಟ್ ಪಡೆದರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ನೇಪಾಳ ತಂಡ ನಿಧಾನಗತಿಯ ಆರಂಭ ಪಡೆದುಕೊಂಡಿತು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟರ್​ಗಳು ಅಬ್ಬರಿಸಿದರೂ ಪ್ರಯೋಜನ ಆಗಲಿಲ್ಲ. ಆಸಿಫ್ ಶೇಖ್ 10, ಕುಶಾಲ್ ಭರ್ಟೆಲ್ 28, ಕುಶಾಲ್ ಮಲ್ಲಾ 29 ರನ್ ಗಳಿಸಿದರು. ದೀಪೇಂದ್ರ ಸಿಂಗ್ 15 ಎಸೆತಗಳಲ್ಲಿ 32 ರನ್ ಹಾಗೂ ಸಂದೀಪ್ ಜೋರಾ 12 ಎಸೆತಗಳಲ್ಲಿ 29 ರನ್ ಚಚ್ಚಿದರು ಗೆಲುವು ಸಾಧ್ಯವಾಗಲಿಲ್ಲ. ನೇಪಾಳ 20 ಓವರ್​ಗಳಲ್ಲಿ 179 ರನ್​ಗೆ 9 ವಿಕೆಟ್ ಕಳೆದುಕೊಂಡು ಸೋಲೊಪ್ಪೊಕೊಂಡಿತು. ಭಾರತ ಪರ ರವಿ ಬಿಷ್ಟೋಯಿ, ಆವೇಶ್ ಖಾನ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.

ಸಾಲಬಾಧೆಗೆ ಮನನೊಂದು ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

https://twitter.com/i/status/1709036591996629158

ಭಾರತ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್ (ನಾಯಕ) , ಯಶಸ್ವಿ ಜೈಸ್ವಾಲ್ , ತಿಲಕ್ ವರ್ಮಾ , ಜಿತೇಶ್ ಶರ್ಮಾ ( ವಿಕೆಟ್ ಕೀಪರ್ ) , ರಿಂಕು ಸಿಂಗ್ , ಶಿವಂ ದುಬೆ , ವಾಷಿಂಗ್ಟನ್ ಸುಂದರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ರವಿ ಬಿಷ್ಣೋಯ್ , ಅವೇಶ್ ಖಾನ್ , ಅರ್ಷ್​ದೀಪ್ ಸಿಂಗ್.

ನೇಪಾಳ ಪ್ಲೇಯಿಂಗ್ ಇಲೆವೆನ್: ಕುಶಾಲ್ ಭರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಮಿ, ಕರಣ್ ಕೆಸಿ, ಅಬಿನಾಶ್ ಬೋಹರಾ, ಸಂದೀಪ್ ಲಾಮಿಚಾನೆ.

ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *