Breaking News

ಹನಿ ಸಿಂಗ್-ಶಾಲಿನಿ ದಂಪತಿಯ 13 ವರ್ಷಗಳ ದಾಂಪತ್ಯ ಜೀವನ ಅಂತ್ಯ

Share News

ಯೋ ಯೋ ಹನಿ ಸಿಂಗ್ ಎಂದೇ ಹೆಸರುವಾಸಿಯಾದ ಪಂಜಾಬಿ ಗಾಯಕ ಹಿರ್ದೇಶ್ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ವಿಚ್ಛೇದನ ಜಾರಿ ಮಾಡಿದೆ.ಈ ಮೂಲಕ ಸುಮಾರು 13 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ನವೆಂಬರ್ 7ರಂದು ದೆಹಲಿ ಫ್ಯಾಮಿಲಿ ಕೋರ್ಟ್ ಈ ದಂಪತಿಗೆ ಬೇರೆ ಆಗಲು ಕಾನೂನಾತ್ಮಕವಾಗಿ ಅನುಮತಿ ನೀಡಿದೆ.ವಿಚ್ಛೇದನ ಸಿಕ್ಕ ಬೆನ್ನಲ್ಲೇ ಶಾಲಿನಿ ಅವರು ಹನಿ ಸಿಂಗ್ ಮೇಲೆ ಹಾಕಿದ್ದ ಕೌಟುಂಬಿಕ ಹಿಂಸೆ ಪ್ರಕರಣವನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸಿಸಿಬಿ ಪೊಲೀಸರ ದಾಳಿ ;ಮೂವರು ಗಾಂಜಾ ಪೆಡ್ಲರ್ಸ್ ಗಳ ಬಂಧನ!

ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆಗಿದ್ದು, 2022ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟ್ ಇಬ್ಬರಿಗೂ ಯೋಚಿಸಲು, ಹೊಂದಾಣಿಕೆ ಮಾಡಿಕೊಳ್ಳಲು ಆರು ತಿಂಗಳು ಅವಕಾಶ ನೀಡಿತ್ತು. ಆದರೆ, ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದರಿಂದ ಕೌಟುಂಬಿಕ ನ್ಯಾಯಾಲಯದ ಪ್ರಿನ್ಸಿಪಲ್ ಜಡ್ಜ್ ಪರಮಜೀತ್ ಸಿಂಗ್ ಅವರು ಇವರಿಗೆ ವಿಚ್ಛೇದನವನ್ನು ನೀಡಿದ್ದಾರೆ.

ಇದನ್ನೂ ಓದಿ: ಕಡಬ : ಕಾಡಾನೆ ದಾಳಿಗೆ ಓರ್ವ ಬಲಿ!

2021 ರಲ್ಲಿ, ಶಾಲಿನಿ ಅವರು ಹನಿ ಸಿಂಗ್ ಮತ್ತು ಅವನ ಕುಟುಂಬವು ತನ್ನನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ, ತನ್ನ ಬಳಿ ಸಾಕ್ಷಿಯಿದೆ ಎಂದು ಹೇಳಿಕೊಂಡಿದ್ದರು.
ಇದೀಗ ಇಬ್ಬರೂ ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ.

WATCH VIDEO ON YOUTUBE:ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *