Breaking News

ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಸೇರಿ ಇಬ್ಬರು ಪುತ್ರಿಯರು ವಿಮಾನ ಅಪಘಾತದಲ್ಲಿ ಮೃತ್ಯು!

Share News

ಲಾಸ್ ಎಂಜಲೀಸ್: 30 ವರ್ಷಗಳ ವೃತ್ತಿಜೀವನದಲ್ಲಿ ಟಾಮ್ ಕ್ರೂಸ್ ಮತ್ತು ಜಾರ್ಜ್ ಕ್ಲೂನಿ ಅವರೊಂದಿಗೆ ಚಲನಚಿತ್ರಗಳಲ್ಲಿ ನಟಿಸಿದ ಜರ್ಮನ್ ಮೂಲದ ಅಮೇರಿಕನ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಗುರುವಾರ ಕೆರಿಬಿಯನ್ ದ್ವೀಪದ ಕರಾವಳಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಮ್ಮೆ ವಿದ್ಯುತ್‌ ಬೆಲೆಯೇರಿಕೆಯ ಬಿಸಿ ತಾಗುವ ಸಾಧ್ಯತೆ

ನಟ ಹಾಗು ಇಬ್ಬರು ಪುತ್ರಿಯರ ಜೊತೆ ಸಣ್ಣ ವಿಮಾನದಲ್ಲಿ ಸೇಂಟ್ ಲೂಸಿಯಾಕ್ಕೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಪೆಟಿಟ್ ನೆವಿಸ್ ದ್ವೀಪದ ಪಶ್ಚಿಮದಲ್ಲಿ ತಾಂತ್ರಿಕ ತೊಂದರೆಗೆ ಒಳಗಾಗಿ ಸಮುದ್ರದಲ್ಲಿ ಪತನಗೊಂಡು ಆಲಿವರ್ ಮತ್ತು ಇಬ್ಬರು ಪುತ್ರಿಯರಾದ 10 ವರ್ಷದ ಮಡಿತಾ ಕ್ಲೆಪ್ಸರ್ ಮತ್ತು 12 ವರ್ಷದ ಆನಿಕ್ ಕ್ಲೆಪ್ಸರ್ ಸಾವನ್ನಪ್ಪಿದ್ದಾರೆ.

ಅಲ್ಲದೆ ಅಪಘಾತದಲ್ಲಿ ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು. ಅಪಘಾತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತಕ್ಕೆ ಒಳಗಾಗಿರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಸುಳ್ಯ: ಅಡಿಕೆಗೆ ಹಳದಿ ರೋಗ; ಮನನೊಂದು ಕೃಷಿಕ ನೇಣು ಬಿಗಿದು ಆತ್ಮಹತ್ಯೆ

ವಿಮಾನ ಸಮುದ್ರದಲ್ಲಿ ಪತನಗೊಳ್ಳುತ್ತಿದ್ದಂತೆ ಮೀನುಗಾರರು, ಮುಳುಗುತಜ್ಞರು ಮತ್ತು ಕೋಸ್ಟ್ ಗಾರ್ಡ್ ಸಿಬಂದಿಗಳು ಸ್ಥಳಕ್ಕೆ ಧಾವಿಸಿ, ಆಲಿವರ್ ಅವರ ಪುತ್ರಿಯರಾದ ಆನಿಕ್ ಮತ್ತು ಮಡಿತಾ ಕ್ಲೆಪ್ಸರ್ ಮತ್ತು ವಿಮಾನದ ಪೈಲಟ್ ಸೇರಿದಂತೆ ಹಡಗಿನಲ್ಲಿದ್ದ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *