Breaking News

25 ವರ್ಷಗಳಿಂದ ಮಡಿಕೇರಿ ಬಿಲ್ಲವ ಸಂಘ ಸೇರಿ ಇತರ ಹಿಂದುಳಿದ ಸಂಘಗಳ ಜಾಗ ಮಂಜೂರಾತಿ ಆಗದೇ ಇರುವ ಸಮಸ್ಯೆಯನ್ನು ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಹರೀಶ್ ಕುಮಾರ್

Share News

ಬೆಂಗಳೂರು: ಕಳೆದ 25 ವರ್ಷಗಳಿಂದ ಹಿಂದುಳಿದ ವರ್ಗಗಳ ಸಂಸ್ಥೆಗಳ ಜಾಗ ಮಂಜೂರಾತಿಯ ಕುರಿತು ವಿಧಾನ ಪರಿಷತ್ತಿನಲ್ಲಿ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಿಸಿದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಕಲಾಪದ ವೇಳೆ ಒಳ ನುಗ್ಗಿ ಅಶ್ರುವಾಯು ಸಿಡಿಸಿದ ಇಬ್ಬರು ವ್ಯಕ್ತಿಗಳು..!

ಮಡಿಕೇರಿ ಬಿಲ್ಲವ ಸಂಘ 25 ವರ್ಷಗ ಗಳಿಂದ ಜಾಗಕ್ಕೆ ಸತತವಾಗಿ ಅರ್ಜಿ ಸಲ್ಲಿಸುತ್ತಿದ್ದರೂ, ಇದುವರೆಗೆ ಜಾಗ ಮಂಜೂರಾತಿ ಆಗದೆ ಇರುವ ಹಾಗೂ ಕಾವೂರು ಬಿಲ್ಲವ ಸಂಘ ಕಳೆದ 15 ವರ್ಷಗಳಿಂದ ಜಾಗ ಮಂಜೂರಾತಿಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ವಿಧಾನ ಪರಿಷತ್ತಿನಲ್ಲಿ ಈ ಗಂಭೀರ ವಿಷಯದ ಕುರಿತು ಸರಕಾರದ ಗಮನ ಸೆಳೆದರು.

ಸರ್ಕಾರ ಕಡತಗಳನ್ನು ತಿರಸ್ಕರಿಸುವಾಗ ಸರಕಾರೇತರ ಸಂಸ್ಥೆಗಳನ್ನು ಖಾಸಗಿ ಎಂದು ನಮೂದಿಸುವ ಬಗ್ಗೆ ಬದಲಾವಣೆ ಅಗತ್ಯವಿದೆ ಎಂಬುದನ್ನು ಪರಿಷತ್ತಿನಲ್ಲಿ ಸರಕಾರದ ಗಮನಕ್ಕೆ ತಂದರು.

ಇದನ್ನೂ ಓದಿ: ಮಂಗಳೂರು: ಗೂಗಲ್ ಮ್ಯಾಪ್ ನಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚಿದ ಕಿಡಿಗೇಡಿಗಳು..!

25 ವರ್ಷಗಳಿಂದ ಜಮೀನು ಮಂಜೂರಾತಿ ಆಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿಂದುಳಿದ ವರ್ಗದ ಈ ಸಂಸ್ಥೆಗಳ ಅಭಿವೃದ್ಧಿಯ ಬಗ್ಗೆ ನಾವು ಗಮನಹರಿಸಬೇಕಾಗಿದೆ ಎಂದು ಸರಕಾರದ ಮುಂದೆ ಭಿನ್ನವಿಸಿಕೊಂಡಿದ್ದಾರೆ.

WATCH VIDEO ON YOUTUBE: ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!


Share News

Leave a Reply

Your email address will not be published. Required fields are marked *