Breaking News

ಶುಕ್ರವಾರ ಕರ್ನಾಟಕ ಬಂದ್ ಸಾಧ್ಯತೆ- 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ!

Share News

ಬೆಂಗಳೂರು: ಕಾವೇರಿ ನೀರನ್ನ ತಮಿಳುನಾಡಿಗೆ (Tamilnadu) ಹರಿಸುತ್ತಿರೋದನ್ನ ಖಂಡಿಸಿ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ಸಾಗಿದೆ. ಇದರ ಜೊತೆಗೆ ಶುಕ್ರವಾರ ನಡೆಯುವ ಬಂದ್ ಕಥೆ ಏನಾಗುತ್ತೆ..!? ನಿನ್ನೆಯ ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ ಸಂಘಟನೆಗಳು ಶುಕ್ರವಾರದ ಬಂದ್ಗೆ ಬೆಂಬಲ ನೀಡ್ತಾವಾ..!? ಹೇಗಿರಲಿದೆ ಕರ್ನಾಟಕ ಬಂದ್ (Karnataka Bandh) ಎಂಬುದನ್ನು ನೋಡೋಣ.

ಮಂಗಳವಾರದ ಬೆಂಗಳೂರು ಬಂದ್ (Bengaluru Bandh) ಮಾಡಿದ ಮೇಲೆ ಶುಕ್ರವಾರ ಮತ್ತೆ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಹಿತಕ್ಕಾಗಿ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಲಾಗಿದೆ ಅಂತಾ ಈಗಾಗಲೇ ಕನ್ನಡ ಒಕ್ಕೂಟ ಸಂಘಟನೆಗಳು ಘೋಷಿಸಿಕೊಂಡಿವೆ. ನಿರೀಕ್ಷೆಗೂ ಮೀರಿ ಬೆಂಗಳೂರು ಬಂದ್‍ಗೆ ಬೆಂಗಳೂರಿಗರು ಜೈ ಎಂದಿದ್ರು. ಇದೇ ರೀತಿ ಅಥವಾ ಇದಕ್ಕೂ ಹೆಚ್ಚಿನ ಯಶಸ್ಸು ಕರ್ನಾಟಕ ಬಂದ್‍ಗೆ ಸಿಗಬೇಕು ಎನ್ನುವ ಲೆಕ್ಕಾಚಾರದಲ್ಲಿ ಕನ್ನಡ ಒಕ್ಕೂಟದ ಪ್ರಮುಖರು ಅಖಾಡಕ್ಕಿಳಿದಿದ್ದಾರೆ.‌

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರ ಪ್ರಧಾನಿ ಅಲ್ಲ ; ಶೋಭಾ ಕರಂದ್ಲಾಜೆ

ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಮಂಗಳವಾರ ಬೆಂಗಳೂರು ಬಂದ್ ಆಯ್ತು ಈಗ ಶುಕ್ರವಾರ ಕರ್ನಾಟಕ ಬಂದ್ ಆಗೋದು ನಿಶ್ಚಿತವಾಗಿದೆ. ಒಂದೇ ವಾರದಲ್ಲಿ ಎರಡೆರಡು ದಿನ ಬಂದ್ ಮಾಡೋದಕ್ಕೆ ಈ ಹಿಂದೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರವೇ ಕರ್ನಾಟಕ ಬಂದ್ ಕೂಡಾ ಮಾಡಬಹುದಲ್ಲವೇ ಎಂಬ ವಾದಗಳೂ ಇದ್ದವು. ಆದರೆ ಮಂಗಳವಾರ ಬೆಂಗಳೂರು ಬಂದ್ ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಾತ್ರ ಬಂದ್ ವಾತಾವರಣ ಕಂಡುಬಂದಿತ್ತು. ಇನ್ನು ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ.

ಬೆಂಗಳೂರು ಬಂದ್ಗೆ ಬೆಂಬಲ ನೀಡಿದ್ದ ಕೆಲವು ಸಂಘಟನೆಗಳು ಕಡೆ ಕ್ಷಣದಲ್ಲಿ ವಾಪಾಸ್ ಪಡೆದು ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಕರ್ನಾಟಕ ಬಂದ್‍ಗೆ ಬೆಂಬಲವನ್ನ ಘೋಷಿಸಿದ್ವು. ಪ್ರಮುಖವಾಗಿ ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಸಪೋರ್ಟ್ ಮಾಡಿದ್ರು. ಈ ಸಂಘಟನೆಗಳ ಜೊತೆಗೆ ಬೇರೆ ಯಾವೇಲ್ಲ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈಗಾಗಲೇ 104 ಸಂಘಟನೆಗಳು ಬೆಂಬಲ ಘೋಷಿಸಿಕೊಂಡಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಯಾರ ಬೆಂಬಲ..!?: ಓಲಾ ಉಬರ್ ಚಾಲಕರ ಸಂಘ, ಆದರ್ಶ ಆಟೋ ಯೂನಿಯನ್, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು, ಮಾರುಕಟ್ಟೆ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ..?, ಜಲಮಂಡಳಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಹೋಟೆಲ್ ಅಸೋಸಿಯೇಷನ್ ಬೆಂಬಲ ಘೋಷಿಸಿವೆ. ಒಟ್ಟಿನಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಸಾಕಷ್ಟು ಸಂಘಟನೆಗಳು ಸಾಥ್ ನೀಡಲಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಗೆ ತಯಾರಿ ನಡೆಸುತ್ತಿದ್ದು, ಸದ್ಯ 80 ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಸಂಪೂರ್ಣ ಬೆಂಬಲ ಸಿಕ್ಕಿದೆ.

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

ಯಾವ್ಯಾವ ಹೆದ್ದಾರಿಗಳು ಬಂದ್?
* ತಮಿಳುನಾಡು ಗಡಿ ಅತ್ತಿಬೆಲೆ ಹೆದ್ದಾರಿ ಬಂದ್
* ಆಂಧ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸೋ ಹೈವೇ ಬಂದ್
* ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ
* ಮೈಸೂರು- ಬೆಂಗಳೂರು ರಸ್ತೆ ಕೆಂಗೇರಿ ಬಳಿ ಬಂದ್
* ಬೆಂಗಳೂರು- ಮಂಗಳೂರು ಹೈವೇ ನೆಲಮಂಗಲ ಜಂಕ್ಷನ್
* ಬೆಂಗಳೂರು-ತುಮಕೂರು ಹೆದ್ದಾರಿ ನವಯುಗ ಟೋಲ್
* ಕನಕಪುರ- ಬೆಂಗಳೂರು ಹೆದ್ದಾರಿ ಕೋಣನಕುಂಟೆ ಬಳಿ ಬಂದ್
* ಮೈಸೂರು, ಮಂಡ್ಯ, ರಾಮನಗರ ಸೇರಿ ಪ್ರಮುಖ ಭಾಗದಲ್ಲಿ ಹೆದ್ದಾರಿ ತಡೆಗೆ ಪ್ಲಾನ್
* ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನ ಬಂದ್ ಮಾಡೋ ಬಗ್ಗೆ ಚಿಂತನೆ

ಒಟ್ಟಾರೆ 104 ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿಕೊಂಡಿವೆ. ಕಾವೇರಿ ವಿಚಾರವನ್ನ ತುಂಬಾ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆ ಶುಕ್ರವಾರವೂ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ.

101 ಕೋಟಿ ಷೇರು ಮೌಲ್ಯ ಹೊಂದಿರುವ ಈ ವ್ಯಕ್ತಿಯ ಸರಳ ಜೀವನ ಒಮ್ಮೆ ನೋಡಿ…!


Share News

Leave a Reply

Your email address will not be published. Required fields are marked *