Breaking News

ಇ-ಜನ್ಮ ಮುಖಾಂತರ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Share News

ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಇನ್ನು ಮುಂದೆ ಸರ್ಕಾರಿ ಕಚೇರಿ ಅಲೆಯಬೇಕಾಗಿಲ್ಲ. ಸೂಕ್ತ ದಾಖಲೆಯನ್ನು ನೀಡಿದರೆ, ನೀವು ಮನೆಯಿಂದಲೇ ಜನನ ಯಾ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು.
ಈ ಸದುದ್ದೇಶದಿಂದಲೇ ಸರ್ಕಾರ ಇ-ಜನ್ಮ ಎಂಬ ಪೋರ್ಟಲ್ ಆರಂಭಿಸಿದೆ. ಈ ಅಂತರ್ಜಾಲಕ್ಕೆ ಲಾಗ್- ಇನ್ ಆಗುವ ಮೂಲಕ ಸೂಕ್ತ ಮಾಹಿತಿ ಮತ್ತು ದಾಖಲೆಯನ್ನು ನೀಡಿ ನೀವು ಆನ್‌ಲೈನ್‌ನಲ್ಲೇ ಜನನ ಯಾ ಮರಣ ಪ್ರಮಾಣಪತ್ರವನ್ನು ಪಡೆಯಬಹುದು.

ಶಾಲಾ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ; ಐವರ ದುರ್ಮರಣ

ಇದಕ್ಕಾಗಿ ನೀವು ಕೆಲವೊಂದು ದಾಖಲೆಪತ್ರಗಳನ್ನು ಈ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದಿದ್ದರೆ ಇ-ಜನ್ಮ ಪೋರ್ಟಲ್‌ಗೆ ಭೇಟಿ ನೀಡಿ ಮಗುವಿನ ಜನ್ಮ ದಿನಾಂಕ, ಜನನ ಸ್ಥಳ, ಮಗುವಿನ ಹೆತ್ತವರ ಆಧಾರ್ ಕಾರ್ಡ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಬೇಕು, ಕೆಲವೊಂದು ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.

ಇಂದು ಬೆಂಗಳೂರು ಬಂದ್; ಅನೇಕ ಸಂಘಟನೆಗಳಿಂದ ಬೆಂಬಲ – ಇಲ್ಲಿದೆ ಮಾಹಿತಿ

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :

ಇಜನ್ಮ ವೆಬ್ ಪೋರ್ಟಲ್‌ಗೆ ಭೇಟಿ ನೀಡಿ.. ಅಲ್ಲಿ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನೋಂದಣಿ ಮಾಡುವಂತಹ ಆಯ್ಕೆಯನ್ನು ಕ್ಲಿಕ್ ಮಾಡಿ

ಆ ಸಂದರ್ಭದಲ್ಲಿ ಅರ್ಜಿದಾರರಿಗೆ ಐಡಿ ಮತ್ತು ಪಾಸ್‌ವರ್ಡ್ ದೊರೆಯುತ್ತದೆ. ಅದನ್ನು ನಮೂದಿಸಿ ಮುಂದುವರಿಯಬೇಕು.

ಆ ಬಳಿಕ, ಕೇಳಲಾದ ಸೂಕ್ತ ದಾಖಲೆಗಳನ್ನು ತುಂಬಿದ ನಂತರ ಅದನ್ನು ನೀವು ಸಲ್ಲಿಕೆ ಕಾರ್ಯ ಮಾಡಬೇ (Press the button Submit)
ಈ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ ಬಳಿಕ ನಿಗದಿತ ದಿನದೊಳಗೆ ಸೂಕ್ತ ಪರಿಶೀಲನೆ ಬಳಿಕ ನಿಮಗೆ ಡಿಜಿಟಲ್ ಆಗಿ ಪ್ರಮಾಣಪತ್ರ ಸಿದ್ಧವಾಗುತ್ತದೆ. ಅದನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *