Breaking News

ಕಾಂಗ್ರೆಸ್ ಜಾತಿ ಗಣತಿಯನ್ನು ಮತಕ್ಕಾಗಿ ಮಾತ್ರ ಬಯಸುತ್ತದೆ; ಅವರಿಗೆ ಮತ ಹಾಕಬೇಡಿ – ಅಖಿಲೇಶ್ ಯಾದವ್

Share News

ಭೋಪಾಲ್: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಕಾಂಗ್ರೆಸ್ ಪಕ್ಷವನ್ನು ಮೋಸ ಮಾಡುವ ಪಕ್ಷ ಎಂದು ಜರಿದಿದ್ದಾರೆ.

ತಮಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ಮುಂಬರುವ ಚುನಾವಣೆಯಲ್ಲಿ ಜನತೆಗೆ ಕಾಂಗ್ರೆಸ್ ನ್ನು ನಂಬದಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು ಸಾವು

ಕಾಂಗ್ರೆಸ್ ಕುತಂತ್ರ ಮಾಡುವ ಪಕ್ಷವಾಗಿದ್ದು ಅದಕ್ಕೆ ಮತ ನೀಡಬೇಡಿ, ಮತಕ್ಕಾಗಿ ಕಾಂಗ್ರೆಸ್ ಈಗ ಜಾತಿಗಣತಿಯನ್ನು ಬೆಂಬಲಿಸುತ್ತಿದೆ. ಕಾಂಗ್ರೆಸ್ ನಮಗೆ ಮೋಸ ಮಾಡಿರಬೇಕಾದರೆ, ಸಾರ್ವಜನಿಕರು ಹೇಗೆ ಅದಕ್ಕೆ ಮುಖ್ಯವಾಗುತ್ತಾರೆ? ಎಂದು ಅಖಿಲೇಶ್ ಯಾದವ್ ಮಧ್ಯಪ್ರದೇಶದ ಜತಾರಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ವಾಗ್ದಾಳಿ ನಡೆಸಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ವೇಳೆಗೆ ಬಿಜೆಪಿ ಕೂಡ ಜಾತಿ ಆಧಾರಿತ ಜನಗಣತಿಗೆ ಬೆಂಬಲ ನೀಡಲಿದೆ ಏಕೆಂದರೆ ಇದು ಮತದಾರರ ಬೇಡಿಕೆಯಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಬರ್ಬರ ಕೊಲೆ!

ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಪಿ ಮುಖ್ಯಸ್ಥರು ಕಳಪೆ ಮೂಲಸೌಕರ್ಯ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಮಧ್ಯಪ್ರದೇಶದ ಈಗಿನ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರ ಉಚಿತ ಪಡಿತರ ಯೋಜನೆಗೆ ಪ್ರತಿಕ್ರಿಯಿಸಿದ ಯಾದವ್, “ನೀವು ಪಡಿತರವಾಗಿ ಏನನ್ನೂ ಪಡೆಯದಿದ್ದರೆ, ನೀವು ಬಿಜೆಪಿಗೆ ಏಕೆ ಮತ ಹಾಕುತ್ತೀರಿ? ಎಂದು ಜನತೆಯನ್ನು ಪ್ರಶ್ನಿಸಿದ್ದು ಬಿಜೆಪಿ ಸರ್ಕಾರವನ್ನು ಲೂಟ್ ತಾಂತ್ರಿಕ್ ಸರ್ಕಾರ ಎಂದು ತಿವಿದಿದ್ದಾರೆ.

WATCH VIDEO ON YOUTUBE:ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *