Breaking News

ವಾಣಿಜ್ಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ ; ಇಲ್ಲಿದೆ ಪರಿಷ್ಕೃತ ದರ

Share News

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ತಿಂಗಳ ಮೊದಲ ದಿನವೇ ಕಹಿ ಸುದ್ದಿ ನೀಡಿವೆ. 19 ಕೆ.ಜಿ ತೂಕದ ವಾಣಿಜ್ಯಿಕ ಎಲ್‌ಪಿಜಿ ಸಿಲಿಂಡರ್‌ಗಳ (Commercial LPG Cylinders) ಬೆಲೆಯನ್ನು (LPG Price Hike) ತೈಲ ಮಾರುಕಟ್ಟೆ ಕಂಪನಿಗಳು 21 ರೂ. ಏರಿಕೆ ಮಾಡಿವೆ. ಇದರಿಂದಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. ಡಿಸೆಂಬರ್‌ 1ರಿಂದಲೇ ಹೊಸ ದರವು ಜಾರಿಗೆ ಬಂದಿದೆ.

ಇದನ್ನೂ ಓದಿ: ಮದುವೆಗೆ ಒಪ್ಪದ ಕಾರಣಕ್ಕೆ ಸಿನೆಮಿಯಾ ರೀತಿಯಲ್ಲಿ ಟೀಚರ್ ಕಿಡ್ನಾಪ್!

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಬಳಿಕ ನವದೆಹಲಿಯಲ್ಲಿ 19 ಕೆ.ಜಿಯ ಒಂದು ಸಿಲಿಂಡರ್‌ಗೆ 1,796.5 ರೂ., ಕೋಲ್ಕೊತಾದಲ್ಲಿ 1,908 ರೂ., ಮುಂಬೈನಲ್ಲಿ 1,749 ರೂ. ಹಾಗೂ ಚೆನ್ನೈನಲ್ಲಿ 1,968.5 ರೂ. ಇದೆ. ಅಕ್ಟೋಬರ್‌ನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 209 ರೂ. ಏರಿಕೆ ಮಾಡಲಾಗಿತ್ತು. ನವೆಂಬರ್‌ ಆರಂಭದಲ್ಲೂ 101 ರೂ. ಏರಿಕೆ ಮಾಡಲಾಗಿತ್ತು. ಎರಡು ವಾರಗಳ ಹಿಂದಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 57 ರೂ. ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೆ ಏರಿಕೆಯಾಗಿದೆ.

ಬೆಲೆಯೇರಿಕೆಯ ಬಳಿಕ ಬೆಂಗಳೂರಿನಲ್ಲೂ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಜಾಸ್ತಿಯಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಸಿಲಿಂಡರ್‌ ಬೆಲೆ ಈಗ 1,857 ರೂ. ಆಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಜಾಸ್ತಿಯಾದರೆ, ಹೋಟೆಲ್‌ಗಳಲ್ಲಿ ಊಟ, ತಿಂಡಿಯ ಬೆಲೆಯೂ ಜಾಸ್ತಿಯಾಗುತ್ತಿದೆ. ಇದರ ಹೊರೆಯು ನೇರವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ.

ಇದನ್ನೂ ಓದಿ: ನೇಪಾಳದಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ!

ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ದಸರಾಗೂ ಮುನ್ನವೇ ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು 300 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಆಗುತ್ತಿದ್ದ ಹೊರೆಯು ತುಸು ಕಡಿಮೆಯಾದಂತಾಗಿದೆ. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆ 905 ರೂ. ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ 1,857 ರೂ. ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡಲಿದೆ ಎಂದೇ ಹೇಳಲಾಗುತ್ತಿದೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *