Breaking News

ವಿಜಯಪುರ- ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ರೈಲಿನ ಸಂಚಾರದಲ್ಲಿ ಬದಲಾವಣೆ!

Share News

ಮಂಗಳೂರು, ಡಿ 19: ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದ ಗುಳೇದಗುಡ್ಡ ಹಾಗೂ ಬಾಗಲಕೋಟೆ ನಡುವೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆ ಮಂಗಳೂರು ಜಂಕ್ಷನ್-ವಿಜಯಪುರ- ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ವಿಷಪ್ರಾಷನ ; ಆಸ್ಪತ್ರೆಗೆ ದಾಖಲು!

ಮಂಗಳೂರು ಜಂಕ್ಷನ್ ನಿಂದ ಮಧ್ಯಾಹ್ನ 2.30 ಕ್ಕೆ ಹೊರಡುವ 07378 ನಂಬರ್ ನ ಮಂಗಳೂರು ಜಂಕ್ಷನ್ – ವಿಜಯಪುರ ವಿಶೇಷ ರೈಲು ಡಿ. 19-28ರ ವರೆಗೆ ಹುಬ್ಬಳ್ಳಿ ಜಂಕ್ಷನ್ ಹಾಗೂ ವಿಜಯಪುರ ನಡುವೆ ಬಹುಶಃ ರದ್ದಾಗುವ ಸಾಧ್ಯತೆ ಇದೆ. ಈ ರೈಲು ತನ್ನ ಸಂಚಾರವನ್ನು ವಿಜಯಪುರದಲ್ಲಿ ಕೊನೆಗೊಳಿಸುವ ಬದಲು ಹುಬ್ಬಳ್ಳಿ ಜಂಕ್ಷನ್ ನಲ್ಲಿ ಸಂಚಾರ ಕೊನೆಗೊಳಿಸಲಿದೆ.

ಇದನ್ನೂ ಓದಿ: ಉಡುಪಿ : ಕಾಪು ಲೀಲಾಧರ್ ಶೆಟ್ಟಿ ಸಾಕು ಮಗಳು ಅಪಹರಣ ಕೇಸ್ ; ಸ್ನೇಹಿತ ಸೇರಿ ನಾಲ್ವರ ಬಂಧನ..!

07377 ನಂಬರ್ ನ ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ವಿಶೇಷ ರೈಲು ಡಿ. 19-28ರ ವರೆಗೆ ವಿಜಯಪುರ ಹಾಗೂ ಹುಬ್ಬಳ್ಳಿ ಜಂಕ್ಷನ್ ನಡುವೆ ಬಹುಶಃ ರದ್ದಾಗುವ ಸಾಧ್ಯತೆ ಇದೆ. ಈ ರೈಲು ತಡರಾತ್ರಿ 12.05 ಕ್ಕೆ ಹುಬ್ಬಳ್ಳಿ ಜಂಕ್ಷನ್ ನಿಂದ ತನ್ನ ಸಂಚಾರ ಪ್ರಾರಂಭಿಸಲಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

WATCH VIDEO ON YOUTUBE: ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!


Share News

Leave a Reply

Your email address will not be published. Required fields are marked *