Breaking News

ಕಾರ್ಕಳ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಮಹಿಳೆ ಸಾವು

Share News

ಕಾರ್ಕಳ ಜನವರಿ 26: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ನಿಟ್ಟೆ ಸಮೀಪದ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಮರಿಯಾ ಫೆರ್ನಾಡಿಸ್ (53ವ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಯೋಧ ಪ್ರಾಂಜಲ್ ಸೇರಿದಂತೆ 80 ಮಂದಿ ಯೋಧರಿಗೆ ಶೌರ್ಯ ಪ್ರಶಸ್ತಿ

ಮಂಗಳೂರು ಕಡೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಬಾಡಿಗೆ ಕಾರು ಹಾಗೂ ನಿಟ್ಟೆ ಕಡೆಯಿಂದ ಪಡುಬಿದ್ರೆ ಕಡೆಯತ್ತ ಬರುತ್ತಿದ್ದ ಕಾರುಗಳ ನಡುವೆ ಕಾರ್ಕಳ ಪಡುಬಿದ್ರೆ ಹೆದ್ದಾರಿಯ ಮಾವಿನಕಟ್ಟೆ ತಿರುವು ರಸ್ತೆಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದ ಮರಿಯಾ ಫರ್ನಾಡಿಸ್ ಎಂಬವರು ಗಂಭೀರ ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭಟ್ಕಳದ ವಿಚ್ಛೇದಿತ ಮಹಿಳೆ ಶಂಕಿತ ಉಗ್ರನ ಜೊತೆ ಲಿಂಕ್‌ – ಲವ್‌ ಕಹಾನಿ


Share News

Leave a Reply

Your email address will not be published. Required fields are marked *