Breaking News

ಬಂಟ್ವಾಳ : ತೆಂಗಿನ ಮರಕ್ಕೆ ಬಡಿದ ಸಿಡಿಲು ; ಪ್ರಾಣಾಪಾಯದಿಂದ ಪಾರು!

Share News

ಬಂಟ್ವಾಳ: ಭಾನುವಾರ ಸಂಜೆ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಆನೇಕ ಕಡೆ ಸಿಡಿಲು ಗುಡುಗಿನ ಮಳೆಯಾಗಿದ್ದು ಬಂಟ್ವಾಳದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಅಂದ್ರಪ್ರದೇಶದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ; ಸಾವಿನ ಸಂಖ್ಯೆ 14 ಕ್ಕೆ ಏರಿಕೆ – 100 ಕ್ಕೂ ಅಧಿಕ ಮಂದಿಗೆ ಗಾಯ!

ಬಂಟ್ವಾಳ ಬುಡೋಳಿ ಫಾತಿಮಾ ಸ್ಟೋರ್ ಮಾಲಕ ಸಿದ್ದೀಕ್ ಅವರ ಮನೆಯಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಂಜೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮವಾಗಿ ತೆಂಗಿನ ಮರದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಹಸಿ ಮರವೇ ಸುಟ್ಟು ಹೋಗಿದೆ. ಮನೆಯಂಗಳದಲ್ಲಿ ತೆಂಗಿನ ಮರ ಇದೆಯಾದರೂ ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ!

ಇದರ ಪಕ್ಕದಲ್ಲೇ ಇವರಿಗೆ ಸೇರಿದ ಅಂಗಡಿ ಕೂಡ ಇದೆಯಾದರೂ ಯಾವುದೇ ಅವಘಡ ಸಂಭವಿಸಿಲ್ಲ. ಸಿಡಿಲು ಬಡಿದ ಕೂಡಲೇ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಕಂಡ ರಿಕ್ಷಾ ಚಾಲಕರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *