Breaking News

ಬೆಂಗಳೂರು ಬಂದ್ ಬಿಸಿ ; BMTC ಬಸ್ ನಲ್ಲಿ ಪ್ರಯಾಣ ಮಾಡಿದ ಅನಿಲ್ ಕುಂಬ್ಳೆ!

Share News

Anil Kumble: ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಬಿಸಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ.ಖಾಸಗಿ ವಾಹನಗಳು ಸಂಚಾರ ಸ್ಥಗಿತಗಗೊಂಡ ಹಿನ್ನೆಲೆ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದಾರೆ. ಬಸ್​ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಅನಿಲ್ ಕುಂಬ್ಳೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗ್ತಿದೆ.

ಮಂಗಳೂರು : ಪ್ರತಿಷ್ಠಿತ ಹೋಟೆಲ್ ನ ಈಜುಕೊಳದಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ!

ಇಂದು ವಿಮಾನ ನಿಲ್ದಾಣದಿಂದ ಮನೆಗೆ ಬಿಎಂಟಿಸಿ ವೋಲ್ವೋ ಬಸ್​ನಲ್ಲಿ ತೆರಳಿದೆ ಎಂದು ಅನಿಲ್ ಕುಂಬ್ಳೆ ಬರೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ಹೊರ ಭಾಗದಲ್ಲಿರುವ ಓಲಾಪಿಕ್‌ ಅಪ್‌ ಪಾಯಿಂಟ್​ನಲ್ಲಿ ನಿಂತು ಪ್ರಯಾಣಿಕರು ಕಾರ್ ಬುಕ್​ ಮಾಡಲು ಪ್ರಯಾಣಿಕರು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಬಂದ್ ಹಿನ್ನೆಲೆ ಯಾವುದೇ ಕಾರ್​ ಬುಕ್​ ಆಗದೇ ವೋಲ್ವೋ ಬಸ್​ಗಳತ್ತ ಮುಖ ಮಾಡುತ್ತಿದ್ದಾರೆ.

ಡ್ರಗ್ ಎಡಿಕ್ಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಪೋಲಿಸ್ ಇಲಾಖೆ!

ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಬರುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಖಾಸಗಿ ವಾಹನಗಳು ಬಂದ್ ಆಗಿರುವ ಹಿನ್ನೆಲೆ ಏರ್​ಪೋರ್ಟ್ ಪ್ರಯಾಣಿಕರು ಸ್ವಂತ ವಾಹನ ಮತ್ತು ಬಿಎಂಟಿಸಿ ಬಸ್​ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.ಏರ್​ಪೋರ್ಟ್​ನತ್ತ ತೆರಳುವ ಮತ್ತು ಬರುವ ಎಲ್ಲಾ ಬಹುತೇಕ ಬಸ್​ಗಳು ಭರ್ತಿಯಾಗಿ ಬರುತ್ತಿವೆ. ಬಿಎಂಟಿಸಿ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್​ಗಳನ್ನು ರಸ್ತೆಗೆ ಇಳಿಸಿದೆ.

ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!

Share News

Leave a Reply

Your email address will not be published. Required fields are marked *