Breaking News

ಬಜ್ಪೆ : ಮುಸ್ಲಿಂ ಯುವಕನ ಮೈ ಮೇಲೆ ಬಂದ ದೈವ; 18 ವರ್ಷದ ಬಳಿಕ ನೇಮೋತ್ಸವಕ್ಕೆ ಮುಂದಾದ ಗ್ರಾಮಸ್ಥರು..!

Share News

ಮಂಗಳೂರು: 18 ವರ್ಷದ ಮುಸ್ಲಿಂ ಯುವಕನ (Muslim Youth) ಮೈ ಮೇಲೆ ದೈವ ಆಹ್ವಾನೆಯಾದ ಘಟನೆಗೆ ಮಂಗಳೂರಿನ (Mangaluru) ಬಜ್ಪೆ ಸಮೀಪದ ಪೆರ್ಮುದೆ (Permude) ಸಾಕ್ಷಿಯಾಗಿದೆ. ಮೂವತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪಡೆದುಕೊಂಡಿತ್ತು. ಭೂಸ್ವಾಧೀನದಲ್ಲಿ ಪಿಲಿಚಾಮುಂಡಿ ದೈವದ (Pilichamundi Daiva) ಗಡುವಾಡು ಸ್ಥಳ ಕಂಪನಿ ಪಾಲಾಗಿತ್ತು. ಆಗ ಭಕ್ತರು ದೈವವನ್ನು ಪೆರ್ಮುದೆಯ ಸೋಮನಾಥಧಾಮಕ್ಕೆ ಸ್ಥಳಾಂತರ ಮಾಡಿದ್ದರು. ಗಡು ಸ್ಥಳದಲ್ಲಿ ಹದಿನೆಂಟು ವರ್ಷಗಳಿಂದ ಆರಾಧನೆ ನಿಂತು ಹೋಗಿತ್ತು. ಆ ಬಳಿಕ ಗ್ರಾಮಸ್ಥರಿಗೆ,ಕಂಪೆನಿಗೆ ನಿರಂತರ ಸಮಸ್ಯೆಗಳು ಕಂಡು ಬಂದಿತ್ತು.

ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಇಲೆಕ್ಟ್ರೀಕ್ ಕಾರು ; ವಿಡಿಯೊ ವೈರಲ್

ಭೂ ಸ್ವಾಧೀನ ಪಡೆದುಕೊಂಡಿದ್ದ ಕಂಪನಿ ಈ ಜಾಗದಲ್ಲಿ ದೈವಸ್ಥಾನ ನಿರ್ಮಿಸಿ ಅರ್ಚಕರಿಂದ ತ್ರಿಕಾಲ ಪೂಜೆ ಮಾಡಿಸುತ್ತಿದೆ. ಆದರೂ ಕಂಪನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಎರಡು ತಿಂಗಳ‌ ಹಿಂದೆ ದೈವಸ್ಥಾನದ ಆವರಣ ಗೋಡೆ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿದ್ದ ಒಡಿಶಾ ಮೂಲದ ಮುಸ್ಲಿಂ ಯುವಕನ ಮೈ ಮೇಲೆ ದೈವಾವೇಷ ಆಗಿತ್ತು.

ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಊರಿನವರು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕೇಳಿದ್ದರು.

ಈ ವೇಳೆ ಕೇಳಿದ ದೈವ ಪ್ರಶ್ನೆಯಲ್ಲಿ ಗಡುವಾಡು ಸ್ಥಳದಲ್ಲಿ ದೈವಕ್ಕೆ ನೇಮೋತ್ಸವ ಮಾಡಲು ಸೂಚನೆ ನೀಡಲಾಗಿತ್ತು. ಸೂಚನೆಯ ಹಿನ್ನೆಲೆ ಹದಿನೆಂಟು ವರ್ಷದ ಬಳಿಕ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

ಮಂಗಳೂರು : ಮಹೇಶ್ ಬಸ್ ಮಾಲಕ ಪ್ರಕಾಶ್ ಆತ್ಮಹತ್ಯೆ!

ತುಳುನಾಡು ದೈವಗಳ ನೆಲೆವೀಡು

ಇಲ್ಲಿ ದೈವಗಳೆಂದರೆ ಎಷ್ಟು ಭಯ ಭಕ್ತಿ ಇದೆಯೋ ಅಷ್ಟೇ ಪ್ರೀತಿಯೂ ತುಳುನಾಡಿನ ಜನರಿಗಿದೆ. ಕರಾವಳಿ ಭಾಗದ ಜನರು ಒಂದು ಕ್ಷಣ ದೇವರನ್ನು ಬೇಕಾದರೂ ಮರೆತು ಬಿಟ್ಟಾರು, ಆದರೆ ದೈವಗಳನ್ನು ಮಾತ್ರ ಎಂದಿಗೂ ಮರೆಯೋದಿಲ್ಲ.

ಯಾವುದೇ ಕೆಲಸ ಕಾರ್ಯಕ್ಕೆ ಇಳಿಯುವ ಮುನ್ನ ದೈವಗಳನ್ನು ನೆನೆಯೋದು ಬಹುತೇಕ ತುಳು ಜನರ ವಾಡಿಕೆ. ಇತ್ತೀಚಿನ ದಿನಗಳಲ್ಲಿ ಕೊರಗಜ್ಜ ದೈವದ ಬಗ್ಗೆ ಸಾಕಷ್ಟು ಜನರು ಅಲ್ಲಿಲ್ಲಿ ಕೇಳಿ ತಿಳಿದುಕೊಂಡಿರುತ್ತಾರೆ. ಆದರೆ ಕೊರಗಜ್ಜ ದೈವ ಮಾತ್ರವಲ್ಲ ತುಳುನಾಡಿನಲ್ಲಿ ಸಾವಿರಕ್ಕೂ ಹೆಚ್ಚು ದೈವಗಳು ಇಂದಿಗೂ ತನ್ನ ಶಕ್ತಿ, ಕಲೆ ಕಾರಣಿಕವನ್ನು ಭಕ್ತರಿಗೆ ತೋರಿಸುತ್ತಲೇ ಬಂದಿವೆ.

ಕಾಂತಾರ ಸಿನಿಮಾ ಬಂದ ಮೇಲಂತೂ ಪಂಜುರ್ಲಿ ದೈವ ಕರಾವಳಿ ಹೊರತಾದ ಜನರಿಗೂ ಸಾಕಷ್ಟು ಪರಿಚಯವಾಗಿದೆ. ಅದರ ಜೊತೆ ಜೊತೆಗೆನೇ ತನ್ನ ಪವಾಡದ ಕಾರಣಕ್ಕೆನ ಕೊರಗಜ್ಜ ದೈವವೂ ಸಾಕಷ್ಟು ಭಕ್ತರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಅಷ್ಟೇ ಶಕ್ತಿ ಮತ್ತು ಪವಾಡದ ಕಾರಣಕ್ಕೆ ಕಲ್ಲುರ್ಟಿ ದೈವವೂ ಪ್ರಸಿದ್ಧಿಯನ್ನು ಪಡೆದಿದೆ.

ಹುಬ್ಬಳ್ಳಿಯಲ್ಲಿ ಗಣಪತಿ ಮೆರವಣಿಗೆಯಲ್ಲಿ ತಪ್ಪಿದ ಬಹುದೊಡ್ಡ ದುರಂತ!


Share News

Leave a Reply

Your email address will not be published. Required fields are marked *