Breaking News

ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ; ಇಬ್ಬರು ದುರ್ಮರಣ

Share News

ಗದಗ, ಜ.24: ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ(Accident) ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ವಿನೋದ್ ಕುಮಾರ್ (38) ಹಾಗೂ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಭಾಗ್ಯನಗರದ ನಿವಸಿ ಗೀತಾ ಕಲಾಲ್ (40) ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮು‌ಂಡರಗಿ (Mundaragi) ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ: ಹನುಮ ವೇಷಧಾರಿ ವೇದಿಕೆಯಲ್ಲೇ ಕುಸಿದು ಬಿದ್ದು ಸಾವು

ನಾಳೆ ಹುಣ್ಣಿಮೆ ಇರುವ ಹಿನ್ನಲೆ ಸಹೋದರಿಯರು ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತಿದ್ದರು. ಇದೀಗ ಮನೆ ಬಿಟ್ಟು ಅರ್ಧಗಂಟೆಯಲ್ಲೇ ಸಾವಿನ ಸುದ್ದಿ ಬಂದಿದ್ದು, ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ. ಇನ್ನುಳಿದಂತೆ ಬಸ್​ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬಂಟ್ವಾಳ: ವಗ್ಗ ಸಮೀಪದ ಮೇನಾಡುವಿನಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ದರೋಡೆಗೈದ 7 ಮಂದಿ ಆರೋಪಿಗಳ ಬಂಧನ


Share News

Leave a Reply

Your email address will not be published. Required fields are marked *